ONLINE NEWS

ಸುಗೂರ ಎನ್ ಗ್ರಾಮದಲ್ಲಿ ಅ.26ರಂದು ಶ್ರೀ ಭೋಜಲಿಂಗೇಶ್ವರ ಅಂಭಾ ಭವಾನಿ ಪಲ್ಲಕ್ಕಿ ಉತ್ಸವ

Share

ಭಾರತ ಟೈಮ್ಸ್ ಸುದ್ದಿ :ಕಲಬುರಗಿ: ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿರುವ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ದೇವಸ್ಥಾನದಲ್ಲಿ ಅ.26ರಂದು ಸೋಮವಾರ ಸೀಗೆ ಹುಣ್ಣಿಮೆಯ ಪ್ರಯುಕ್ತ ಶ್ರೀ ಅಂಭಾ ಭವಾನಿ ದೇವಿಯ ಘಟಸ್ಥಾಪನೆ ಮುಕ್ತಾಯ ಸಮಾರಂಭ, ಅಂಭಾ ಭವಾನಿ ಪಲ್ಲಕ್ಕಿ ಉತ್ಸವ ಹಾಗೂ ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಹಿರಗಪ್ಪ ತಾತನವರ ಭವ್ಯ ಮೆರವಣಿಗೆ ನಡೆಯಲಿದೆ.

ಅ.26ರಂದು ಸೋಮವಾರ ಬೆಳಿಗ್ಗೆ 11.30ಕ್ಕೆ ಗ್ರಾಮದ ಪೂಜ್ಯರ ಮನೆಯಿಂದ ಶ್ರೀಮಠದವರೆಗೆ ಸುಗೂರ ಎನ್ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಕಾಲ್ನಡಿಗೆಯಲ್ಲಿ ಭವ್ಯ ಶೋಭಾಯಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಜರುಗಲಿದೆ.

ಈ ಸಂದರ್ಭದಲ್ಲಿ ಅನೇಕ ರಾಜಕೀಯ ಮುಖಂಡರು, ಸಂಗೀತಗಾರರು ಹಾಗೂ ವಿವಿಧ ಕಲಾ-ಸಾಂಸ್ಕೃತಿಕ ಮೇಳಗಳು ಭಾಗವಹಿಸಲಿವೆ. ಡೊಳ್ಳು ಕುಣಿತ, ಡೋಲು-ನಗಾರಿ, ಹಲಗೆ (ತಮಟೆ) ವಾದ್ಯಗಳು, ಅಕ್ಕನ ಬಳಗದ ಭಜನೆ ಹಾಗೂ ಕೀರ್ತನೆ ಮೇಳಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಲಿವೆ.

 

ಶ್ರೀ ಭೋಜಲಿಂಗೇಶ್ವರ ಅಂಭಾ ಭವಾನಿ ಪಲ್ಲಕ್ಕಿ ಉತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ, ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಹಿರಗಪ್ಪ ತಾತನವರ ಆಶೀರ್ವಾದ ಹಾಗೂ ದರ್ಶನ ಪಡೆದು ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀಮಠದ ಸದ್ಭಕ್ತರು ಹಾಗೂ ಗ್ರಾಮದ ಪ್ರಮುಖರು ಮನವಿ ಮಾಡಿದ್ದಾರೆ.

 

ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ್ ಬೆನಕನಹಳ್ಳಿ, ಭೀಮರೆಡ್ಡಿಗೌಡ ಪಾಟೀಲ್ ಕುರಾಳ ಸುಗೂರ ಎನ್, ವಿಶ್ವನಾಥ ರೆಡ್ಡಿ ಪಾಟೀಲ್ ಸುಗೂರ ಎನ್, ಶರಣಗೌಡ ವಕೀಲರು, ಮಹಿಪಾಲರೆಡ್ಡಿಗೌಡ ಕರಣಗಿ, ಸಂಗಾರೆಡ್ಡಿಗೌಡ ಮಾಲಿ ಪಾಟೀಲ್, ಮಹಾದೇವ ರೆಡ್ಡಿ ತುಮಕೂರು, ಬಸ್ಸುಗೌಡ ಮಾಲಿ ಪಾಟೀಲ್, ಈರಣ್ಣ ಬಲಕಲ್ ಯಾದಗಿರ, ಎಸ್.ಎಸ್. ಜ್ಯಗೇರಿ ಯಾದಗಿರ, ಶಂಕರಗೌಡ ಮಾಸ್ತರ ಯಾದಗಿರ,ಮಲ್ಲಪ್ಪ ಅರಿಕೇರಿ ಯಾದಗಿರಿ. ಪ್ರಭು ಹೂಗಾರ ಯಾದಗಿರ, ಸುರೇಶ್ ಕೋಟಿಮನಿ, ಬಸವರಾಜ ಹಡಪದ ಸುಗೂರ ಎನ್, ರಾಜೇಂದ್ರ ನಾಯ್ಕೋಡಿ ಸುಗೂರ ಎನ್, ಬಸವರಾಜ ಹವಾಲ್ದಾರ್ ಯಾದಗಿರ, ನರೇಂದ್ರ ಗುತ್ತಿ, ಮಲ್ಲಯ್ಯ ಕಸಬಿ ಯಾದಗಿರ, ಮಲ್ಲಿನಾಥ ಚಿನ್ನಾಪೋಟೋ ಸ್ಟುಡಿಯೋ, ಸಾಬ್ಬಣ್ಣ ಚಿತ್ರಕಲಾ ಶಿಕ್ಷಕರು. ಸಿದ್ದುಗೌಡ ಕುರಾಳ ಸುಗೂರ ಎನ್, ಬಾಬು ಪಾಟೀಲ ಸುಗೂರ ಎನ್,ಸಂಗಣ್ಣ ಮಂಡ್ನಳ್ಳಿ, ಅನಿಲಕುಮಾರ ಚವ್ಹಾಣ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಪಲ್ಲಕ್ಕಿ ಉತ್ಸವಕ್ಕೆ ಮಹಾರಾಷ್ಟ್ರ, ಮುಂಬೈ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಹಾಗೂ ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಅವರು ಕನ್ನಡ ದಿನಪತ್ರಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button