ONLINE NEWS

ಚಿಕ್ಕೋಡಿಯಲ್ಲಿ ನೆಟ್ವರ್ಕ್ ವಿಸ್ತರಿಸಿದ್ದ ಬೈಕ್ ಕಳ್ಳರ ಗ್ಯಾಂಗ್ ಲಾಕ್: ₹3.70 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನ ಜಪ್ತಿ

Share

ಭಾರತ ಟೈಮ್ಸ್ ಸುದ್ದಿ :ಚಿಕ್ಕೋಡಿ:ಕರೋಶಿ ಗ್ರಾಮದಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಭರ್ಜರಿ ತನಿಖೆ ನಡೆಸಿದ ಚಿಕ್ಕೋಡಿ ಠಾಣೆ ಪೊಲೀಸರು, ಮೂವರು ಅಂತರಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 3,70,000 ರೂಪಾಯಿ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
​ಘಟನೆಯ ವಿವರ:
ಕರೋಶಿ ಗ್ರಾಮದ ಶ್ರೀಮತಿ ರೇಣುಕಾ ರಮೇಶ ವಡ್ರಾಳೆ ಎಂಬುವವರ ಮನೆಯ ಮುಂದೆ ನಿಲ್ಲಿಸಿದ್ದ ₹75,000 ಮೌಲ್ಯದ ಹೊಂಡಾ ಶೈನ್ (KA-23 HC-5916) ದ್ವಿಚಕ್ರ ವಾಹನ ಜುಲೈ 12 ಮತ್ತು 13 ರ ಮಧ್ಯರಾತ್ರಿ ಕಳುವಾಗಿತ್ತು. ಈ ಕುರಿತು ನೀಡಿದ ದೂರಿನನ್ವಯ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 278/2026, ಕಲಂ 303[2] BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
​ವಿಶೇಷ ತಂಡದ ಕಾರ್ಯಾಚರಣೆ:
ಬೆಳಗಾವಿ ಎಸ್ಪಿ ಶ್ರೀ ಕೆ. ರಾಮರಾಜನ್ (ಐಪಿಎಸ್), ಹೆಚ್ಚುವರಿ ಎಸ್ಪಿ ಆರ್.ಬಿ. ಬಸ್ಸರಗಿ, ಚಿಕ್ಕೋಡಿ ಡಿಎಸ್ಪಿ ಗೋಪಾಲಕೃಷ್ಣ ಗೌಡರ ಹಾಗೂ ಸಿಪಿಐ ವಿಶ್ವನಾಥ ಚೌಗಲೆ ಅವರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಪಿಎಸ್‌ಐ ಶಿವಕುಮಾರ ಬಿರಾದಾರ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
​ಕಾರ್ಯಾಚರಣೆ ಕೈಗೊಂಡ ವಿಶೇಷ ತಂಡವು ಅಕ್ಟೋಬರ್ 9 ರಂದು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಚಿಕ್ಕೋಡಿ, ಅಂಕಲಿ, ಸದಲಗಾ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ಒಟ್ಟು 7 ಬೈಕ್‌ಗಳನ್ನು ವಶಪಡಿಸಿಕೊಂಡಿದೆ.


Share

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button